Menu

ಹರೇ ರಾಮ,

ಶೈಕ್ಷಣಿಕ ವರ್ಷ 2025 –  26 ರಲ್ಲಿ ಶಾಲೆಯ ಕನ್ನಡ ವಿಭಾಗದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ  ಕನ್ನಡ ಪದ ಕಟ್ಟು, ಪ್ರಬಂಧ, ವರದಿ, ಕಥಾ ಸಮಯ, ಆಶುಭಾಷಣ ಸ್ಪರ್ಧೆಗಳ ರಸ ನಿಮಿಷಗಳು.

‘ಅಕ್ಷರಗಳ ಪದ ಕಟ್ಟು ” ರಚಿಸುವ ಮೂಲಕ  ವಿದ್ಯಾರ್ಥಿಗಳಲ್ಲಿ ಕನ್ನಡ ಜ್ಞಾನದ ಆಸಕ್ತಿಯನ್ನು ಬೆಳೆಸಲು ಹಾಗೂ ಪ್ರೇರೇಪಿಸಲು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳಲ್ಲಿ ಕನ್ನಡ ಸ್ಪಷ್ಟ ಉಚ್ಚಾರಣೆ, ನೆನಪಿನ ಶಕ್ತಿಯನ್ನು ಹೆಚ್ಚಿಸಲು ’ಕನ್ನಡ ಕಥೆ ಹೇಳುವ ಸ್ಪರ್ಧೆ’ಯನ್ನು ಆಯೋಜಿಸಲಾಯಿತು.

ಕನ್ನಡ ನಾಡಿನ ಹಿರಿಮೆ , ಗರಿಮೆಯನ್ನು ಅರ್ಥೈಸಿ ಕೊಳ್ಳಲು ವಾಕ್ಯ ರಚನೆಯ ಕೌಶಲ್ಯವನ್ನು ಅಭಿವೃದ್ಧಿಗೊಳಿಸಲು ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.